‘ಪುಂಗಿದಾಸ’ ಈ ಶುಕ್ರವಾರ ಪ್ರೇಕ್ಷಕನ ಮುಂದೆ
Posted date: 27 Tue, May 2014 – 11:37:35 PM

 ಅನೇಕ ದಾಸರನ್ನು ಕಂಡ ಮೇಲೆ ಈ ‘ಪುಂಗಿದಾಸ’ ರಾರಾಜಿಸಲು ಬರುತ್ತಿದ್ದಾನೆ. ಕೋಮಲ್ ಕುಮಾರ್ ಸ್ಪೆಷಲ್ ‘ಪುಂಗಿದಾಸ’ ಸಕ್ಸಸ್ ಬೆನ್ನ ಹಿಂದೆ ಕಟ್ಟಿಕೊಂಡಿರುವ ಎಂ ಎಸ್ ಶ್ರೀನಾಥ್ ಅವರ ನಿರ್ದೇಶನದ ಚಿತ್ರ. ಶ್ರೀನಾಥ್ ಅವರ ನಿರ್ದೇಶನದ ‘ರಾಂಬೋ’ ಹಾಗೂ ಅವರು ಕಥೆ ಒದಗಿಸಿದ ‘ವಿಕ್ಟರಿ’ ಜಯಶಾಲಿ ಆದ ಸಿನೆಮಗಳು. ಈಗ ಅವರದೇ ಕಥೆ, ಚಿತ್ರಕಥೆ, ನಿರ್ದೇಶನದ ‘ಪುಂಗಿದಾಸ’ ಈ ಶುಕ್ರವಾರ ಪ್ರೇಕ್ಷಕನ ಮುಂದೆ.
ಎಸ್ ಎಸ್ ವಿ ಪ್ರೊಡಕ್ಷನ್ ಅಡಿಯಲ್ಲಿ ಶ್ರೀಮತಿ ಎಸ್ ಬಿ ಭಾಗ್ಯಮ್ಮ ಸದಾಶಿವ ಹಾಗೂ ಡಿ ಸದಾಶಿವ ನಿರ್ಮಾಣದ ‘ಪುಂಗಿದಾಸ’ ೩೨ ಕಲಾವಿದರ ಚಿತ್ರ ೧೨೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.
ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ೬೦-೭೦ ರ ದಶಕದ ಹಾಡು ಬ್ಲಾಕ್ ಅಂಡ್ ವೈಟ್...ಈಗ ಸೂಪರ್ ಹಿಟ್ ಆಗಿದೆ.
ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಷ್, ಪದ್ಮಜ ರಾವು, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.
‘ಪುಂಗಿ ದಾಸ’ ಚಿತ್ರಕ್ಕೆ ಸಂಗೀತದ ಪುಂಗಿ ಊದುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ).
ಅರುಳ್ ಅವರ ಛಾಯಾಗ್ರಹಣವಿದೆ.ಸುರೇಶ್, ಜಯಂತ್ ಕಾಯ್ಕಿಣಿ, ರಾಘವೇಂದ್ರ ಕಾಮತ್, ಕಮಲ್ ಸಾರಥಿ, ಹರೀಶ್ ಶೃಂಗ  ಅವರ ಸಾಹಿತ್ಯವಿದೆ. ಮುರಳಿ ಅವರ ನೃತ್ಯ ನಿರ್ದೇಶನ ಇದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed